ಶ್ರೀರಸ್ತು ಶುಭಮಸ್ತು ಪ್ರಸ್ತುತ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದೆ. ಈ ಕಾರ್ಯಕ್ರಮವು ಝೀ ಮರಾಠಿಯ ಅಗ್ಗಬಾಯಿ ಸಾಸುಬಾಯಿ ಧಾರಾವಾಹಿಯ ಅಧಿಕೃತ ರಿಮೇಕ್ ಆಗಿದೆ . ಈ ಧಾರಾವಾಹಿಯು 2022ರ ಅಕ್ಟೋಬರ್ 31ರಂದು ಪ್ರಥಮ ಪ್ರದರ್ಶನಗೊಂಡಿತು. ಧಾರಾವಾಹಿಯಲ್ಲಿ ಸುಧಾ ರಾಣಿ, ಅಜಿತ್ ಹಂಡೆ ಮತ್ತು ದೀಪಕ್ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. == ಕಥಾವಸ್ತು == ವಿಧವೆಯಾಗಿರುವ ತುಳಸಿ (ಸುಧಾರಾಣಿ) ತನ್ನ ಕಟ್ಟುನಿಟ್ಟಾದ ಮಾವ, ಮಗ ಸಮರ್ಥ ಮತ್ತು ಮಗಳು ಸಿರಿಯೊಂದಿಗೆ ಜೀವನ ನಡೆಸುತ್ತಾ ಇರುತ್ತಾಳೆ. ವಿಧವೆಯಾಗಿರುವ ತುಳಸಿಯು ಸ್ನೇಹವನ್ನು ಮತ್ತು ಬೆಂಬಲವನ್ನು ತನ್ನ ಸೊಸೆ ಸಿರಿಯಲ್ಲಿ ಕಾಣುತ್ತಾಳೆ. ಸಿರಿ ತನ್ನ ಅತ್ತೆ ತುಳಸಿಗೆ ಮರುಮದುವೆ ಮಾಡಲು ತನ್ನ ಕುಟುಂಬ ಮತ್ತು ಸಮಾಜದ ವಿರುದ್ಧ ನಿಂತು ಹೋರಾಟ ಮಾಡುತ್ತಾಳೆ. ಕಥೆಯು ತುಳಸಿಯ ಮರುಮದುವೆಯ ನಂತರದ ಜೀವನದ ಬಗ್ಗೆ ಗಮನಹರಿಸುತ್ತದೆ. == ಪಾತ್ರವರ್ಗ == ಸುಧಾ ರಾಣಿ :- ತುಳಸಿ ಪಾತ್ರದಲ್ಲಿ ಅಜಿತ್ ಹಂಡೆ :- ಮಾಧವ್ ಪಾತ್ರದಲ್ಲಿ ದೀಪಕ್ ಗೌಡ / ದರ್ಶಿತ್ :- ಸಮರ್ಥ್ ಪಾತ್ರದಲ್ಲಿ ಚಂದನಾ ರಾಘವೇಂದ್ರ:- ಸಿರಿ ಪಾತ್ರದಲ್ಲಿ ವೆಂಕಟ್ ರಾವ್ ದತ್ತಾತ್ರೇಯನಾಗಿ ಅರ್ಫಾತ್:- ಅವಿನಾಶ್ ಪಾತ್ರದಲ್ಲಿ ಲಾವಣ್ಯ:- ಪೂರ್ಣಿ ಪಾತ್ರದಲ್ಲಿ ನೇತ್ರಾ ಜಾಧವ್:- ಶಾರ್ವರಿ ಪಾತ್ರದಲ್ಲಿ ಲಾವಣ್ಯ ಮೋಹನ್:- ನಿಧಿ ಪಾತ್ರದಲ್ಲಿ ನಕುಲ್:- ಅಭಿಲಾಷ್ ಪಾತ್ರದಲ್ಲಿ == ರೂಪಾಂತರಗಳು == == ಬಾಹ್ಯಕೊಂಡಿಗಳು == ಝೀ5 == ಉಲ್ಲೇಖಗಳು ==